•  
  •  
  •  
  •  
Index   ವಚನ - 916    Search  
 
ಆಲಿಕಲ್ಲ ನಡುವೆ ಆರಯ್ಯಾ ಅಗ್ನಿಯನಿರಿಸಿದವರು? ಅದು ನಂದದೆ ಉರಿಯದೆ ನಿಂದ ಪರಿಯ ನೋಡಾ! ಮನಪವನಗಳ ಅಡುಗಬ್ಬನಿಕ್ಕಿ, ಅಗ್ನಿಯ ಪಟುಮಾಡಬಲ್ಲವರನೊಬ್ಬರನೂ ಕಾಣೆ! ಹಸಿಯಡಗನೆ ಹಿಡಿದು ಹಸಿದು ಸತ್ತರು. ಗುಹೇಶ್ವರಲಿಂಗದಲ್ಲಿ ಪ್ರಾಣಲಿಂಗಿಗಳಪೂರ್ವ!
Transliteration Ālikalla naḍuve ārayyā agniyanirisidavaru? Adu nandade uriyade ninda pariya nōḍā! Manapavanagaḷa aḍugabbanikki, agniya paṭumāḍaballavaranobbaranū kāṇe! Hasiyaḍagane hiḍidu hasidu sattaru. Guhēśvaraliṅgadalli prāṇaliṅgigaḷapūrva!
Hindi Translation ओले के बीच में किसने अग्नि रखी अय्या ? वह बिना बुझे बिना जले रही रीति देखा? मन पवनों को लकड़ी रखे, अग्नि को जलाने जैसे करनेवाले किसी एक को नहीं देखा। आधे पके आहार पकडे भूखे मरे । गुहेश्वरलिंग में अपूर्व प्राणलिंग है। Translated by: Eswara Sharma M and Govindarao B N