ಎಂಟು ನೆಲೆಯ ಮಣಿಮಾಡದ ಮಂಟಪದ ಮೇಲೆ,
ಏಳು ವಶ್ಯ ಕನ್ನಿಕೆಯರು, ಮಹಾಲಿಂಗಕ್ಕೆ
ಮಾಣಿಕದಾರತಿಯನೆತ್ತಿದರಲ್ಲಾ!
ಚಾಮರಂಗಳು ಬೀಸದೆ,
ಮಾಣಿಕಸೂಸಕ ಕೆದರದೆ,
ಅಧರಪಟಂಗಳು ಹಳಚದೆ,
ಸ್ವಯಲಿಂಗಾರ್ಚನೆಯ ಮಾಡುವಲ್ಲಿ
ಪ್ರಸಾದಕ್ಕೆ ಕರುಣದಿಂ ದಯಮಾಡಿಸೈ ಗುಹೇಶ್ವರಾ.
Transliteration Eṇṭu neleya maṇimāḍada maṇṭapada mēle,
ēḷu vaśya kannikeyaru, mahāliṅgakke
māṇikadāratiyanettidarallā!
Cāmaraṅgaḷu bīsade,
māṇikasūsaka kedarade,
adharapaṭaṅgaḷu haḷacade,
svayaliṅgārcaneya māḍuvalli
prasādakke karuṇadiṁ dayamāḍisai guhēśvarā.
Hindi Translation आठ स्थान के रत्न खचित मंटप पर
सात वश्य कन्निकाएँ।
महालिंग को माणिक्य आरति उतार दिया न!
चामरा बिना झूले,माणिक आभरण न बिखरे
न छुए अधर, स्वयं लिंगार्चन करने में
प्रसाद को कृपा से पधारो गुहेश्वरा!
Translated by: Eswara Sharma M and Govindarao B N