ಎಡದ ಕೈಯ ಲಿಂಗವ ಬಲದ ಕೈಯಲ್ಲಿ ಮುಟ್ಟಿ,
ಸ್ಪರ್ಶನವ ಮಾಡುವ ಕರ್ಮಿಯ ನಾನೇನೆಂಬೆ!
ಭವಭವದಲ್ಲಿ ಬಹ ಕರ್ಮಿಯ ನಾನೇನೆಂಬೆ!
ಸತ್ಯವೇನವದಿರ, ಮಿಥ್ಯವೇನವದಿರ,
ಹಿಡಿದ ಕೈ ತಾನೆ ಎಂದರಿಯರಾಗಿ.
ಗುಹೇಶ್ವರಲಿಂಗವು ಬೆರಗಾದನು!
Transliteration Eḍada kaiya liṅgava balada kaiyalli muṭṭi,
sparśanava māḍuva karmiya nānēnembe!
Bhavabhavadalli baha karmiya nānēnembe!
Satyavēnavadira, mithyavēnavadira,
hiḍida kai tāne endariyarāgi.
Guhēśvaraliṅgavu beragādanu!
Hindi Translation बाएँ हाथ का लिंग दाहिने हाथ से छूकर,
स्पर्श करनेवाला कर्मी को मैं क्या कहूँ?
भव भव में आये कर्मी को मैं क्या कहूँ?
उनका सत्य क्या है, उनका मिथ्य क्या है?
पकडे हाथ खुद न जाने ।
गुहेश्वर लिंग चकित हुआ।
Translated by: Eswara Sharma M and Govindarao B N