ಎನ್ನ ತನುವೆ ಚೆನ್ನಬಸವಣ್ಣನಯ್ಯಾ,
ಎನ್ನ ಮನವೆ ಮಡಿವಾಳನಯ್ಯಾ,
ಎನ್ನ ಪ್ರಾಣವೆ ಸಂಗನಬಸವಣ್ಣನಯ್ಯಾ,
ಗುಹೇಶ್ವರಾ, ನಿಮ್ಮ ಶರಣರ ಘನವನು
ಎನ್ನ ಸರ್ವಾಂಗದಲ್ಲಿ ಕಂಡು
ಪರಮಸುಖಿಯಾಗಿರ್ದೆನು.
Transliteration Enna tanuve cennabasavaṇṇanayyā,
enna manave maḍivāḷanayyā,
enna prāṇave saṅganabasavaṇṇanayyā,
guhēśvarā, nim'ma śaraṇara ghanavanu
enna sarvāṅgadalli kaṇḍu
paramasukhiyāgirdenu.
Hindi Translation मेरा शरीर चेन्नबसवण्णा, मेरा मन मडिवाळय्या,
मेरा प्राण संगनबसवण्णा,
गुहेश्वरा तुम्हारे शरणों के घन को
मेरे सर्वांग में देख परम सुखी बना हुआ हूँ।
Translated by: Eswara Sharma M and Govindarao B N