Index   ವಚನ - 8    Search  
 
ಸಂಸಾರವೆಂಬ ಶರಧಿಯಲ್ಲಿ ನಿಂದು ಗುರುಕರಜಾತನೆನಸಿ, ಅರುಹು ತಲೆದೋರಿ ಆಚರಣೆಯಂಗೋಡು, ಪ್ರಸಾದಕ್ರೀಯ ನಡೆಸುವಾತನ ಭಾವಜಲ್ಮೆಯ ಸಾವಧಾನವೆಂತೆಂದಡೆ, ಶಿವಲಿಂಗದಿಂದರದ ಸಮಸ್ತ ರೂಪಾತಿಶಯಮಂ ಶಿವಲಿಂಗ ಪ್ರಾಸದವೆಂದೇ ತಾನಂಗೀಕರಿಸುವನು. ಶಬ್ದರೂಪಾದ ಸಮಸ್ತ ಶಬವೆಲ್ಲವಂ ಪ್ರಸಾದಲಿಂಗದ ಪ್ರಸಾದವೆಂದೇ ತಾನಂಗೀಕರಿಸುವನು. ಭಕ್ಷ್ಯ ಭೋಜ್ಯ ಲೇಹ್ಯ ಚೋಷ್ಯ ಮೊದಲಾದ ರೂಪಾದ ಪದಾರ್ಥಮಂ ಇಷ್ಟಲಿಂಗ ಸಮರ್ಪಣೆಯಂ ಮಾಡಿ ಗುರುಲಿಂಗದಿಂದರಿದ ರುಚಿಯ ಗುರುಲಿಂಗ ಪ್ರಸಾದವೆಂದೇ ತಾನಂಗೀಕರಿಸುವನು. ಗಂಧಾನುಲೇಪನ ಕುಸುಮಮಾಲೆ ಮಡಿವರ್ಗ ದಿವ್ಯದುಕೂಲಂಗಳು ರತ್ನಾಭರಣ ಶೀತೋಷ್ಣ ಮೃದು ಕಠಿಣ ವಾಯು ಸ್ಪರ್ಶನ ವನಿತೆಯರ ಭೋಗಸುಖಂಗಳಿಗನುಕೂಲವಾದವೆಲ್ಲಮಂ ಜಂಗಮಲಿಂಗಪ್ರಸಾದವೆಂದಂಗೀಕರಿಸುವಾತನು ಮಹಾಪ್ರಸಾದಿಯಯ್ಯಾ ಮಹಾಲಿಂಗ ಶಶಿಮೌಳಿ ಸದಾಶಿವಾ.