Index   ವಚನ - 3    Search  
 
ನಡೆನುಡಿ ಸಿದ್ಧಾಂತವಾದಲ್ಲಿ , ಕುಲ ಹೊಲೆ ಸೂತಕವಿಲ್ಲ, ನುಡಿ ಲೇಸು, ನಡೆಯಧಮವಾದಲ್ಲಿ, ಅದು ಬಿಡುಗಡೆಯಿಲ್ಲದ ಹೊಲೆ, ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ, ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ ? ಆಚಾರವೆ ಕುಲ, ಅನಾಚಾರವೆ ಹೊಲೆ, ಇಂತೀ ಉಭಯದ ತಿಳಿದರಿಯಬೇಕು. ಕೈಯುಳಿ ಶಕ್ತಿ ಅಡಿಗೂಂಟಕ್ಕಡಿಯಾಗಬೇಡ, ಅರಿ ನಿಜಾ[ತ್ಮಾ] ರಾಮ ರಾಮನಾ.