ವೇದ ಶಾಸ್ತ್ರಕ್ಕೆ ಹಾರುವುನಾಗಿ,
ವೀರ ವಿತರಣಕ್ಕೆ ಕ್ಷತ್ರಿಯನಾಗಿ,
ಸರ್ವವನಾರೈದು ನೋಡುವಲ್ಲಿ,
ವೈಶ್ಯನಾಗಿ ವ್ಯಾಪಾರದೊಳಗಾಗಿ,
ಕೃಷಿಯ ಮಾಡುವುದಕ್ಕೆ ಶೂದ್ರವಾಗಿ,
ಇಂತೀ ಜಾತಿಗೋತ್ರದೊಳಗಾದ
ನೀಚ ಶ್ರೇಷ್ಠವೆಂಬ ಎರಡು ಕುಲವಲ್ಲದೆ,
ಹೊಲೆ ಹದಿನೆಂಡುಜಾತಿಯೆಂಬ ಕುಲವಿಲ್ಲ,
ಬ್ರಹ್ಮವನರಿದಲ್ಲಿ ಬ್ರಾಹ್ಮಣ.
ಸರ್ವಜೀವಹತ ಕರ್ಮಕ್ಕೊಳಗಾಗಿದ್ದಲ್ಲಿ ಸಮಗಾರ.
ಈ ಉಭಯವನರಿದು ಮರೆಯಲಿಲ್ಲ,
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ.
Art
Manuscript
Music
Courtesy:
Transliteration
Vēda śāstrakke hāruvunāgi,
vīra vitaraṇakke kṣatriyanāgi,
sarvavanāraidu nōḍuvalli,
vaiśyanāgi vyāpāradoḷagāgi,
kr̥ṣiya māḍuvudakke śūdravāgi,
intī jātigōtradoḷagāda
nīca śrēṣṭhavemba eraḍu kulavallade,
hole hadineṇḍujātiyemba kulavilla,
brahmavanaridalli brāhmaṇa.
Sarvajīvahata karmakkoḷagāgiddalli samagāra.
Ī ubhayavanaridu mareyalilla,
kaiyuḷi katti aḍigūṇṭakkaḍiyāgabēḍa,
ari nijā[tmā] rāma rāmanā.