Index   ವಚನ - 1    Search  
 
ಅಂಗಕ್ಕೆ ಲಿಂಗ, ಮನಕ್ಕೆ ಅರಿವಾಗಬೇಕೆಂದು ಸಂದೇಹಗೊಂಬುದು ಅರಿವೋ, ಆತ್ಮನೋ ? ಅಂಗಕ್ಕೆ ಅರಿವೆಂಬುದೊಂದು ಜೀವ, ಜೀವಕ್ಕೆ ಕೊಡುವುದೊಂದು ಬೆಳಗು. ತನ್ನಲ್ಲಿ ತೋರುವ ಘಟಬಿಂಬದ ಛಾಯೆ ಹಲವು ತೆರನಾದಂತೆ, ಸ್ಥೂಲಕ್ಕೆ ಸ್ಥೂಲ, ಸೂಕ್ಷ್ಮಕ್ಕೆ ಸೂಕ್ಷ್ಮವಾಗಿ ಹೆಚ್ಚು ಕುಂದಿಲ್ಲದೆ ತೋರುವ ತೋರಿಕೆ, ಘಟದ ಗುಣವೋ, ಬಿಂಬದ ಗುಣವೋ ? ಎಂಬುದ ತಾನರಿತಲ್ಲಿ, ಉಭಯದ ಸೂತಕಕ್ಕೆ ಹೊರಗು. ಹೊರಗೆಂಬ ಭಾವವ ಅರಿದಲ್ಲಿ, ಕಾಮಧೂಮ ಧೂಳೇಶ್ವರನೆಲ್ಲಿಯೂ ತಾನೆ.