Index   ವಚನ - 20    Search  
 
ಆತ್ಮನ ಅರಿವು ಜೀವ ಭಾವವೆಂಬುದು ಅದೇತರ ಕೂಟಸ್ಥ? ಕಾಯದ ಸಂಸರ್ಗವೆಂದಡೆ, ಅದು ವಿಭೇದರೂಪು. ಕರಣಂಗಳ ಸಂಸರ್ಗದಿಂದ ಎಂದಡೆ, ಆ ಇಂದ್ರಿಯಂಗಳು ಸ್ವತಂತ್ರಗಳಲ್ಲ. ಜೀವಾತ್ಮ ಭಾವಾತ್ಮ ಪರಮಾತ್ಮನೆಂದಲ್ಲಿ, ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ ಕಂಡು ಕೂಡಿ ಅರಿದು ಮರೆದುದೇನೊ ? ಎಂಬ ತ್ರಿವಿಧವ ತಿಳಿದು ಸಂಧಿಸಿ, ಕಂಡೆಹೆನೆಂಬ ಸಂದನಳಿದು, ಅಳಿದೆನೆಂಬ ಸಂದೇಹ ನಿಂದಲ್ಲಿ, ಅದಾವ ಬೆಂಬಳಿಯ ಹೊಲಬು ? ಅದು ನಾಮ ರೂಪು ಭಾವ ಬಯಲು, ಕಾಮಧೂಮ ಧೂಳೇಶ್ವರಾ.