ಎನ್ನ ತನುವ ನಿರ್ಮಲ ಮಾಡಿದನಯ್ಯಾ,ಬಸವಣ್ಣನು.
ಎನ್ನ ಮನವ ನಿರ್ಮಲ ಮಾಡಿದನಯ್ಯಾ, ಚೆನ್ನಬಸವಣ್ಣನು.
ಎನ್ನ ಪ್ರಾಣವ ನಿರ್ಮಲ ಮಾಡಿದನಯ್ಯಾ, ಪ್ರಭುದೇವರು.
ಇಂತೆನ್ನ ತನುಮನಪ್ರಾಣವ ನಿರ್ಮಲ ಮಾಡಿ,
ತಮ್ಮೊಳಿಂಬಿಟ್ಟುಕೊಂಡ ಕಾರಣ,
ಕಾಮಧೂಮ ಧೂಳೇಶ್ವರಾ
ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
Art
Manuscript
Music
Courtesy:
Transliteration
Enna tanuva nirmala māḍidanayyā,basavaṇṇanu.
Enna manava nirmala māḍidanayyā, cennabasavaṇṇanu.
Enna prāṇava nirmala māḍidanayyā, prabhudēvaru.
Intenna tanumanaprāṇava nirmala māḍi,
tam'moḷimbiṭṭukoṇḍa kāraṇa,
kāmadhūma dhūḷēśvarā
nim'ma śaraṇara śrīpādakke namō namō enutirdenu.