ಮರದಲ್ಲಿ ಉರಿ ಹುಟ್ಟಿ,
ಅಡಗಿ ಸುಡದ ಭೇದವ ಬಲ್ಲಡೆ,
ಕಾಯದ ಲಿಂಗದ ಸೂತಕವಿಲ್ಲ.
ಕಲ್ಲಿನಲ್ಲಿ ಕಿಡಿ ಹುಟ್ಟಿ, ಅಲ್ಲಿ ಉರಿಯದೆ,
ಆಚೆಯಲ್ಲಿ ಸಾಕಾರವ ಮುಟ್ಟಿ ಉರಿವಂತೆ,
ಆ ನಿಹಿತವನರಿದಲ್ಲಿ ಪ್ರಾಣಲಿಂಗವೆಂಬ ಮನಸೂತಕವಿಲ್ಲ.
ಸೂತಕ ಪ್ರಸೂತಕವಾಗಿ, ಏತಕ್ಕೂ ಒಡಲಿಲ್ಲದಿಪ್ಪುದು,
ಅದೇ ಅಜಾತತ್ವ, ಕಾಮಧೂಮ ಧೂಳೇಶ್ವರಾ.
Art
Manuscript
Music
Courtesy:
Transliteration
Maradalli uri huṭṭi,
aḍagi suḍada bhēdava ballaḍe,
kāyada liṅgada sūtakavilla.
Kallinalli kiḍi huṭṭi, alli uriyade,
āceyalli sākārava muṭṭi urivante,
ā nihitavanaridalli prāṇaliṅgavemba manasūtakavilla.
Sūtaka prasūtakavāgi, ētakkū oḍalilladippudu,
adē ajātatva, kāmadhūma dhūḷēśvarā.