Index   ವಚನ - 84    Search  
 
ಮರೀಚಿಕಾಜಲವ ಮೊಗೆದವರುಂಟೆ ? ಸುರಚಾಪವ ಹಿಡಿದು ಎಸೆದವರುಂಟೆ ? ವಾರಿಯ ಮಣಿಗೆ ದಾರವನೇರಿಸಿದವರುಂಟೆ ? ಬಯಲೊಳಗಡಗಿದ ಬ್ರಹ್ಮ, ಶಿಲೆಯೊಳಗಾಡುವ ಸಲೆ ನೆಲೆಯರಿಯದ ಸೂತಕರಿಗೆ ಮಹಾಘನದ ಹೊಲಬೇತಕ್ಕೆ ಕಾಮಧೂಮ ಧೂಳೇಶ್ವರಾ ?