Index   ವಚನ - 86    Search  
 
ರೂಪುರಹಿತ ಶೂನ್ಯ, ರೂಪುವಿರಹಿತ ನಿಶ್ಶೂನ್ಯ. ರೂಪುರಹಿತ ಲಿಂಗ, ರೂಪುವಿರಹಿತ ಆತ್ಮ. ರೂಪುರಹಿತ ಜೀವ, ರೂಪುವಿರಹಿತ ಪರಮ. ಸಮಯರಹಿತ ಲೋಕ, ಸಮಯವಿರಹಿತ ಶರಣ. ಉಭಯವಿರಹಿತವಾಗಿ ನಿಂದ ನಿಲವು, ಸರ್ವತೂಕಕ್ಕೆ ಹೊರಗು, ಕಾಮಧೂಮ ಧೂಳೇಶ್ವರಾ.