ತೊರೆಯ ಕಟ್ಟೆಯ ಕಟ್ಟಿ ನಿಲಿಸಲುಬಹುದೆ?
ನೆರೆ ಮರುಳಿಗೆ ಬುದ್ಧಿಯ ಹೇಳಲುಬಹುದೆ?
ತರಿಸಲುವೋದವನಿದಿರಿಚ್ಫೆಯನರಿಯದೆ ಮರೆದಿದ್ದಡೆ
ಹಗೆ ಇರಿವುದ ಮಾಣ್ಬನೆ?
ದೂರದಲ್ಲಿ ಹೋದವ ಊರ ಸುದ್ದಿಯನರಿಯ.
ಹೇಳದೆ ಬಯಲಾದ ಕಾಣಾ, ಎನ್ನ ಅಜಗಣ್ಣತಂದೆ.
Art
Manuscript
Music
Courtesy:
Transliteration
Toreya kaṭṭeya kaṭṭi nilisalubahude?
Nere maruḷige bud'dhiya hēḷalubahude?
Tarisaluvōdavanidiricpheyanariyade marediddaḍe
hage irivuda māṇbane?
Dūradalli hōdava ūra suddiyanariya.
Hēḷade bayalāda kāṇā, enna ajagaṇṇatande.