Index   ವಚನ - 37    Search  
 
ಹಿಡಿದಾಚಾರವ ಬಿಡದನ್ನಕ್ಕರ, ಎನ್ನ ಅರಿವ ಮರೆಯದನ್ನಕ್ಕರ, ಎನ್ನ ಮನವ ಸುಡದನ್ನಕ್ಕರ, ಎನ್ನ ಬೆಡಗಿನ ಗುರುವ ತೊರೆಯದನ್ನಕ್ಕರ, ಸುಸರವೆಂತಪ್ಪುದೊ ಹೇಳಾ? ಹೋಹ ಬಟ್ಟೆಯನರಿಯದನ್ನಕ್ಕರ ತಾನಾಗಬಾರದು ಕಾಣಾ, ಎನ್ನ ಅಜಗಣ್ಣತಂದೆಯಂತೆ.