Index   ವಚನ - 9    Search  
 
ಹಗಲಿದ್ದಲ್ಲಿ ಕತ್ತಲೆಯಿರ್ಪುದೆ? ಕತ್ತಲೆಯಿದ್ದಲ್ಲಿ ಹಗಲಿರ್ಪುದೆ? ಜಾಗ್ರವಿದ್ದಲ್ಲಿ ಸ್ವಪ್ನವಿರ್ಪುದೆ? ದುಃಖವಿದ್ದಲ್ಲಿ ಆನಂದವಿರ್ಪುದೆ? ನೀನು ಪ್ರಸನ್ನಮಾದಲ್ಲಿ ನಾನಿರ್ಪೆನೆ? ನಾನು ಪ್ರಸನ್ನಮಾದಲ್ಲಿ ನೀನಿರ್ಪೆಯಾ? ನೀನಿದ್ದಲ್ಲಿ ನಾನಿಲ್ಲ ನಾನಿದ್ದಲ್ಲಿ ನೀನಿಲ್ಲ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.