ಅನಾದಿಶರಣ ಜಂಗಮಲಿಂಗದ
ಪಾದಪೂಜೆಯನಿಳುಹಿದ ಶರಣನು,
ಪಾದೋದಕ ಸ್ಪರ್ಶನೋದಕ ಭಸ್ಮೋದಕ ಸಂಬಂಧವಾದ
ಪಾತ್ರೆಯ ಉದಕದೊಳಗೆ ಮೂಲಪ್ರಣಮವ ಲಿಖಿಸಿ,
ಚಿದ್ಬಿಂದುವನಿಟ್ಟು ಪಡಕೊಂಬುವ ತಟ್ಟೆ ಬಟ್ಟಲೊಳಗೆ
ಷಡಕ್ಷರಪ್ರಣಮವ ಸಪ್ತಕೋಟಿಮಹಾಮಂತ್ರಗಳಿಗೆ ಜನನಸ್ಥಾನವಾದ
ಷಡುಪ್ರಣಮಗಳ ಪ್ರಥಮ ತಟ್ಟೆಯಲ್ಲಿ,
ಪೂರ್ವಪಶ್ಚಿಮ ಉತ್ತರದಕ್ಷಿಣಕ್ಕೆ ಷಡ್ವಿಧ ರೇಖೆಗಳ ರಚಿಸಿ,
ಸದ್ಯೋಜಾತ ವಾಮದೇವ ಅಘೋರ ತತ್ಪುರುಷ
ಈಶಾನಮುಖಸ್ಥಾನವರಿದು,
ಪಂಚದಿಕ್ಕುಗಳಲ್ಲಿ ಪಂಚಪ್ರಣಮವ ಲಿಖಿಸಿ,
ದ್ವಿತೀಯ ಬಟ್ಟಲೊಳಗೆ ಮೂಲಪ್ರಣಮವ ಲಿಖಿಸಿ,
ಪಾದಾಂಗುಷ್ಠದಡಿಯಲ್ಲಿಟ್ಟು, ತನ್ನ ವಾಮಕರದಂಗುಲಿಗಳೊಳಗೆ
ಲಿಂಗಜಂಗಮ ಜಂಗಮಲಿಂಗ ಲಿಂಗಶರಣ
ಬಸವಲಿಂಗ ಲಿಂಗಪ್ರಸಾದವೆಂಬ
ಇಪ್ಪತ್ತೈದು ಪ್ರಣಮಗಳೆ ಪ್ರಭುಲಿಂಗಲೀಲೆಯೆಂದು
ಆ ಕರಸ್ಥಲದಿರವ ಗುರುಮುಖದಿಂದರಿದು
ತನ್ನ ತಾ ಮರೆದಿಪ್ಪವರೆ ನಿರವಯಮಹಾಂತರೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
Art
Manuscript
Music
Courtesy:
Transliteration
Anādiśaraṇa jaṅgamaliṅgada
pādapūjeyaniḷuhida śaraṇanu,
pādōdaka sparśanōdaka bhasmōdaka sambandhavāda
pātreya udakadoḷage mūlapraṇamava likhisi,
cidbinduvaniṭṭu paḍakombuva taṭṭe baṭṭaloḷage
ṣaḍakṣarapraṇamava saptakōṭimahāmantragaḷige jananasthānavāda
ṣaḍupraṇamagaḷa prathama taṭṭeyalli,
pūrvapaścima uttaradakṣiṇakke ṣaḍvidha rēkhegaḷa racisi,
sadyōjāta vāmadēva aghōra tatpuruṣa
Īśānamukhasthānavaridu,
pan̄cadikkugaḷalli pan̄capraṇamava likhisi,
dvitīya baṭṭaloḷage mūlapraṇamava likhisi,
pādāṅguṣṭhadaḍiyalliṭṭu, tanna vāmakaradaṅguligaḷoḷage
liṅgajaṅgama jaṅgamaliṅga liṅgaśaraṇa
basavaliṅga liṅgaprasādavemba
ippattaidu praṇamagaḷe prabhuliṅgalīleyendu
ā karasthaladirava gurumukhadindaridu
tanna tā maredippavare niravayamahāntarembe kāṇā
sid'dhamallikārjunaliṅgēśvara.