Index   ವಚನ - 26    Search  
 
ನಿರಾವಲಂಬಜಂಗಮಲಿಂಗಮೂರ್ತಿಯ ಚರಣಕಮಲದಡಿಯಲ್ಲಿ ಸ್ಥಾಪ್ಯವಾದ ಹಸ್ತಕಮಲದಲ್ಲಿ ಶಕ್ತಿಸಂಬಂಧವಾದ ಕಿರಿಬೆರಳು ಶಿವಸಂಬಂಧವಾಗಿ ರಾಜಿಸುವಲ್ಲಿ ಅಂಗುಷ್ಠವ ಕೂಡಿಸಿ, ತರ್ಜನಿ ಮಧ್ಯ ಅನಾಮಿಕಾಂಗುಲಿಗಳಲ್ಲಿ ಅನಾದಿವಿಡಿದುಬಂದ ಜ್ಞಾನಗುರುಲಿಂಗಜಂಗಮಸಂಬಂಧವಾಗಿರ್ಪುದು. ಆ ಜಂಗಮಮೂರ್ತಿಯ ಅಂಗುಷ್ಠವೆರಡು ಮಧ್ಯದಲ್ಲಿ ಕೂಡಿ ಆದಿವಿಡಿದುಬಂದ ಕ್ರಿಯಾಗುರುಲಿಂಗಜಂಗಮಸಂಬಂಧವಾಗಿರ್ಪುದು. ಇಂತೆಸೆವ ಸಾಕಾರ ನಿರಾಕಾರದ ನಿಲುಕಡೆಯ ಗುರುಸ್ವಾನುಭಾವದಿಂದರಿದು ಆನಂದಿಸುವ ನಿಲುಕಡೆಯೆಂತೆಂದೊಡೆ : ಆ ಜಂಗಮಮೂರ್ತಿಗಳಿಗೆ ಲಿಂಗಜಂಗಮದ ಕ್ರಿಯಾಪಾದೋದಕ ಪ್ರಸಾದಸೇವನೆ ಮಾಡಿದುದರಿಂದ ಆ ಜಂಗಮಮೂರ್ತಿಗಳಲ್ಲಿ ಆದಿವಿಡಿದು ಬಂದ ಕ್ರಿಯಾಗುರುಲಿಂಗಜಂಗಮಸ್ಥಲಸಂಬಂಧವಾಗಿರ್ಪುದು. ಆ ಸದ್ಭಕ್ತಗಣಂಗಳಲ್ಲಿ ಜಂಗಮಲಿಂಗದ ಜ್ಞಾನಪ್ರಸಾದ ಪಾದೋದಕಸೇವನೆ ಮಾಡಿದುದರಿಂದ ಆ ಸದ್ಭಕ್ತಗಣಂಗಳಿಗೆ ಅನಾದಿವಿಡಿದುಬಂದ ಜ್ಞಾನಗುರುಲಿಂಗಜಂಗಮಸ್ಥಲ ಸಂಬಂಧವಾಗಿರ್ಪುದು. ಈ ನಿಲುಕಡೆಯನರಿದ ಸಂಗಸಮರಸೈಕ್ಯರೆ ನಿರವಯಪ್ರಭು ಮಹಾಂತರೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.