Index   ವಚನ - 77    Search  
 
ಅನಾದಿಪ್ರಮಥಗಣದಿರವನರಿದು, ಸತ್ಯಶುದ್ಧ ನಡೆನುಡಿದೃಢಚಿತ್ತರಾಗಿ, ಇಹ ಪರ ಭೋಗಯೋಗದ ಬಯಕೆಯ ನೀಗಿ ನಿರವಯಲ ಸೇರಿ, ನಿತ್ಯಮುಕ್ತರಾಗಬೇಕಾದ ಭಕ್ತ ಜಂಗಮ ಗುರುಲಿಂಗಕ್ಕೆ ಆಚಾರವೆ ಗುರು, ಆಚಾರವೆ ಲಿಂಗ, ಆಚಾರವೆ ಜಂಗಮ, ಆಚಾರವೆ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ, ಭಕ್ತಗಣಪ್ರಸಾದಿ ಶರಣೈಕ್ಯರೆಂದುದು ಗುರುವಚನ; ಅದು ಕಾರಣವಾಗಿ, ಆಚಾರದ ಕುರುಹ ತಿಳಿದು, ಆಚರಿಸಿ, ಸಂಬಂಧವಿಟ್ಟು, ತನ್ನ ತಾನಾಗಬಹುದಲ್ಲದೆ ಆಚಾರವನುಲ್ಲಂಘಿಸಿ, ಆಚಾರವ ಬಿಟ್ಟು ಅನಾಚಾರಸಂಗಸಮರತಿಯ ಬಳಸಿದೊಡೆ ತನ್ನ ತಾನಾಗಬಾರದೆಂದುದು ಹರಗುರುವಾಕ್ಯವು. ಇದ ತಿಳಿದ ಮಹಾಂತರು, ಆಚಾರವನಾಚರಿಸಬೇಕು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.