Index   ವಚನ - 85    Search  
 
ನಿಜವಿರತ ಜಂಗಮಲಿಂಗದೇವನು, ಸದ್ಭಕ್ತಾಲಯದಲ್ಲಿ, ನಿಜಪಾದೋದಕ ಪಂಚಾಕ್ಷರವ ಮೂವತ್ತಾರು ತೆರದಲ್ಲಿ ಮೂವತ್ತಾರು ಇಂದ್ರಿಯಗಳಲ್ಲಿ ತುಂಬಿತುಳುಕಾಡುತ್ತ, ನಿಜಪ್ರಸಾದವ ಷಡಕ್ಷರವ ಮೂವತ್ತಾರು ತೆರದಲ್ಲಿ ಮೂವತ್ತಾರು ಕರಣಂಗಳಲ್ಲಿ ತುಂಬಿ ತುಳುಕಾಡುತ್ತ, ಆ ಪಾದೋದಕ ಪ್ರಸಾದ ಪಂಚಾಕ್ಷರ ಷಡಕ್ಷರಂಗಳ ನಿಜಕಿರಣ ದೃಷ್ಟಿಯೆಂಬ ಸದ್ರೂಪು ಚಿದ್ರೂಪು ಪ್ರಕಾಶಂಗಳ ನಿಜಪ್ರಸನ್ನ ಪ್ರಸಾದವೆ ತನ್ನ ಪ್ರತಿಬಿಂಬವಾದ ಸದ್ಭಕ್ತನ ತನುದುಂಬಿ ಮನದುಂಬಿ ಪುತ್ರ ಮಿತ್ರ ಕಳತ್ರರ ತನುಮನಧನದುಂಬಿ ನೆನಹು ನಿರ್ಧಾರವಾಗಿ, ಪರಿಪೂರ್ಣಾನುಭಾವದಿರವೆ ನಿಜಜಂಗಮಸ್ಥಲ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.