ಸತ್ತುಚಿತ್ತಾನಂದ ನಿತ್ಯಪರಿಪೂರ್ಣಾನುಭವಿಯಾದ
ನಿಜಜಂಗಮ ಲಿಂಗಶರಣ ನಿಂದ ನಿಲುಕಡೆಯ ಇರವೆಂತೆಂದೊಡೆ:
ಕಾಯ ವಾಚ ಮಾನಸ ಮೊದಲಾದ
ಕರಣೇಂದ್ರಿಯವಿಷಯಾದಿಗಳೆಲ್ಲ ಒಬ್ಬುಳಿಯಾಗಿ,
ನಿಜಮೋಕ್ಷಸ್ವರೂಪ ಭಕ್ತವಿರಕ್ತಸ್ಥಲದ ವರ್ಮಮಂ
ಪೂರ್ವಪುರಾತನ ನೂರೊಂದು ವಿರಕ್ತರು,
ನೂತನ ಪುರಾತನ ಗಣಸಮೂಹವೆಲ್ಲ
ಪರಮಪಾತಕಸೂತಕವಿರಹಿತವಾದ
ಮಹದರುವೆಂಬ ಗುರು, ಸರ್ವಾಚಾರವೆಂಬ ಲಿಂಗ,
ಸತ್ಕ್ರಿಯಾಸಮ್ಯಜ್ಞಾನಾನುಭಾವವೆಂಬ ಜಂಗಮಸ್ಥಲವನರಿದವರು
ಲಿಂಗವೆಂಬೆರಡಕ್ಷರ ಸಂಬಂಧವಾದ ಪಿಂಡಬ್ರಹ್ಮಾಂಡಗಳ
ಅನಾಚಾರವ ಕಂಡು ಅವಗಡಿಸಿ
ನಿಂದ್ಯವಮಾಡುವುದೆ ಪಾಪದಾಗರ.
ಲಿಂಗವಿದ್ದ ಸ್ಥಾನವೆಲ್ಲ ನಿಜವೆಂದು, ಅನಾಚಾರವ ಕಂಡು,
ಲಾಂಛನ ವಿಭೂತಿ ರುದ್ರಾಕ್ಷಿಗಳ ನೋಡಿ,
ಭಾವದಲ್ಲಿ ಭರಿತವಿಲ್ಲದೆ ಕೂಡಿ,
ತೀರ್ಥಪ್ರಸಾದಾನುಭಾವಸೇವಿತರೆನಿಸಿ,
ಸ್ತುತಿಮಾಡುವುದೆ ಪುಣ್ಯದಾಗರ.
ಶೈವಮತದವರು ಮೃತ್ತಿಕೆಯ ಲಿಂಗನ ಮಾಡಿ,
ಅಷ್ಟವಿಧಾರ್ಚನೆ ಷೋಡಶೋಪಚಾರದಿಂದರ್ಚಿಸಿ
ಪುಣ್ಯವ ಪಡೆದು, ಕಡೆಗೆ ಬಿಟ್ಟಲ್ಲಿ ಪಾಪಕೆ ಗುರಿಯಾದಂತೆ,
ಈಗಳಾದರೂ ಗುರುಮಾರ್ಗಾಚಾರ ಕೋವಿದರು
ಆ ಸತ್ಯವಾದುದ ದೇವರೆಂದು
ಪೂಜಿಸಿದೊಡೆ ಒಂದನೆ ಪುಣ್ಯವಯ್ಯ.
ಪೂಜಿಸಿದಂತಾದ್ದು ಅಸತ್ಯವೆಂದು ಬಾಹ್ಯಾಂತರಂಗದಲ್ಲಿ
ಹೊಳೆದೊಡೆ ಎರಡನೆ ಪಾಪವಯ್ಯ.
ಇಂತಪ್ಪ ಪುಣ್ಯಪಾಪವಿರಹಿತನಾಗಿ
ಶ್ರುತಿಗುರುಸ್ವಾನುಭಾವಕ್ಕೆ ಸನ್ಮತವಾದುದ ಒಡೆವೆರದು
ಬಳಸಿಬ್ರಹ್ಮಚಾರಿ ಉಂಡುಪವಾಸಿಯಾಗಿಯು,
ತನಗೊಂದಾಶ್ರಯವಿಲ್ಲದೆ ತಮ್ಮ ನಿಜವೆ ತನಗಾಶ್ರಯವಾಗಿ,
ನಿರಾಶ್ರಯದಿಂದ ಹೊನ್ನು ಹೆಣ್ಣು ಮಣ್ಣೆಂಬ
ಭ್ರಾಂತುಭ್ರಮೆಯಳಿದು ಪೂರ್ವಪುರಾತನರೊಳಗೆ
ಘನಲಿಂಗದೇವರು ಗುಮ್ಮಳಾಪುರದ
ಗೌರಮ್ಮನವರು ಸಹವಾಗಿ
ಹೋದ ಪರಮವಿರಾಗತಿಯ,
ಅಂದಿಂದೆಂಬ ಸಂದೇಹದ ರಜಗೀಲ ಕಳೆದುಳಿದು,
ಧ್ಯಾನ ಮೌನ ನೇಮ ನಿತ್ಯ ಸತ್ಯ ಸದುಭಾವಭರಿತನಾಗಿ,
ಗುರುಮಾರ್ಗಾಚಾರ ಸಮ್ಮೋಹಿತರಾದ
ಅಚ್ಚಪ್ರಸಾದಿ ಭಕ್ತ ಜಂಗಮಾಚರಣೆಯೆ ತನಗಂಗವೆನಿಸಿ,
ನಿಚ್ಚಪ್ರಸಾದಿ ಭಕ್ತಜಂಗಮಾಚರಣೆಯೆ ತನ್ನ ತತ್ಪ್ರಾಣವೆನಿಸಿ,
ಸಮಯ ಪ್ರಸಾದಿ ಭಕ್ತಜಂಗಮಾಚರಣೆಯೆ ತನ್ನ ಭಾವವೆನಿಸಿ,
ಗುರುಪ್ರಸಾದವ ಪಡೆದು,
ಲಿಂಗಪ್ರಸಾದಿ ಭಕ್ತಜಂಗಮಾಚರಣೆಯೆ ತನ್ನ ಹಸ್ತಪಾದವೆನಿಸಿ,
ಈ ಮಾರ್ಗವನರಿಯದೆ ಮೂಢಾತ್ಮ
ಲಿಂಗದೇಹಿ ಪರಮಪಾತಕರೆಲ್ಲ
ತನ್ನ ವಿಸರ್ಜನತಾಣವೆಂದರಿದು, ಎಚ್ಚರತಪ್ಪದೆ,
ಸಾವಧಾನ ನಡೆನುಡಿಯಿಂದ ಪರನಾದ ಚಿದ್ಬಂದುಸ್ವರೂಪವಾದ
ವಿಭೂತಿ ರುದ್ರಾಕ್ಷಿ ಪ್ರಣಮ ಪಾದೋದಕ ಪ್ರಸಾದಂಗಳ
ಸಾಕಾರವಾದಿಷ್ಟಲಿಂಗಾರೋಪಿತ,
ನಿರಾಕಾರವಾದ ಪ್ರಾಣಲಿಂಗಾರೋಪಿತ
ನಿರವಯವಾದ ಭಾವಲಿಂಗಾರೋಪಿತಂಗಳಿಂದ
ಪರಿಪೂರ್ಣ ಮಿಶ್ರಾರ್ಪಣದೊರ್ಮಾದಿವರ್ಮವರಿದು
ಮೇಲಾದ ಅಯೋಗ್ಯಾತೀತವಾದ ತ್ರಿಕೂಟದ
ಸಂಗಸಮರತಿಯ ಸರ್ವಾವಸ್ಥೆಗಳೆಲ್ಲ ಅಡಿಮೆಟ್ಟಿ
ಯೋಗ್ಯವಾದ ತ್ರಿಕೂಟದ ಸಂಗಸಮರತಿಯ
ಸರ್ವಾವಸ್ಥೆಗಳಲ್ಲಗಲದೆ,
ಎಚ್ಚರಂದಳೆದು, ಮೈಮರೆಯದೆ,
ತ್ರಿವಿಧಗುಹ್ಯಸ್ಥಾನವೆಂಬ ತ್ರಿವಿಧಮನೆಯಲ್ಲಿರ್ಪ
ತ್ರಿವಿಧಬಿಂದುಚಲನಾರಹಿತವಾಗಿ,
ತನ್ನ ತಾ ಸಾಕ್ಷಿಯಿಂದ, ನಿಜನಿವಾಸಕ್ಕೆ ತವರುಮನೆಯೆಂದು,
ಗ್ರಾಮಬಂಧನ ನಿಳಯಬಂಧನ
ದ್ರವ್ಯಬಂಧನ ಈಷಣತ್ರಯಬಂಧನವೆಂಬ
ಕಾಲಕಾಮಮಾಯಾಸಂಸಾರಸಾಗರವ ದಾಂಟಿ,
ನಿರ್ಮಾಯ ಕಾಲಕಾಮನಿಃಸಂಸಾರಸಾಗರಮಂ ಅತಿಮೋಹವಿಲ್ಲದೆ,
ಲಿಂಗನಿಮಿತ್ಯವಾಗಿ, ದ್ರವ್ಯದ ನಿಃಕಳಂಕಮೂರ್ತಿ ತಾನೇ ತಾನಾಗಿ
ವಿರಾಜಿಸುವವರೆ ಚಿತ್ಕಲಾಪ್ರಸಾದಿ ಭಕ್ತಜಂಗಮ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
Art
Manuscript
Music
Courtesy:
Transliteration
Sattucittānanda nityaparipūrṇānubhaviyāda
nijajaṅgama liṅgaśaraṇa ninda nilukaḍeya iraventendoḍe:
Kāya vāca mānasa modalāda
karaṇēndriyaviṣayādigaḷella obbuḷiyāgi,
nijamōkṣasvarūpa bhaktaviraktasthalada varmamaṁ
pūrvapurātana nūrondu viraktaru,
nūtana purātana gaṇasamūhavella
paramapātakasūtakavirahitavāda
mahadaruvemba guru, sarvācāravemba liṅga,
Satkriyāsamyajñānānubhāvavemba jaṅgamasthalavanaridavaru
liṅgavemberaḍakṣara sambandhavāda piṇḍabrahmāṇḍagaḷa
anācārava kaṇḍu avagaḍisi
nindyavamāḍuvude pāpadāgara.
Liṅgavidda sthānavella nijavendu, anācārava kaṇḍu,
lān̄chana vibhūti rudrākṣigaḷa nōḍi,
bhāvadalli bharitavillade kūḍi,
tīrthaprasādānubhāvasēvitarenisi,
stutimāḍuvude puṇyadāgara.
Śaivamatadavaru mr̥ttikeya liṅgana māḍi,
aṣṭavidhārcane ṣōḍaśōpacāradindarcisi
Puṇyava paḍedu, kaḍege biṭṭalli pāpake guriyādante,
īgaḷādarū gurumārgācāra kōvidaru
ā satyavāduda dēvarendu
pūjisidoḍe ondane puṇyavayya.
Pūjisidantāddu asatyavendu bāhyāntaraṅgadalli
hoḷedoḍe eraḍane pāpavayya.
Intappa puṇyapāpavirahitanāgi
śrutigurusvānubhāvakke sanmatavāduda oḍeveradu
baḷasibrahmacāri uṇḍupavāsiyāgiyu,
tanagondāśrayavillade tam'ma nijave tanagāśrayavāgi,
nirāśrayadinda honnu heṇṇu maṇṇemba
bhrāntubhrameyaḷidu pūrvapurātanaroḷage
ghanaliṅgadēvaru gum'maḷāpurada
Gauram'manavaru sahavāgi
hōda paramavirāgatiya,
andindemba sandēhada rajagīla kaḷeduḷidu,
dhyāna mauna nēma nitya satya sadubhāvabharitanāgi,
gurumārgācāra sam'mōhitarāda
accaprasādi bhakta jaṅgamācaraṇeye tanagaṅgavenisi,
niccaprasādi bhaktajaṅgamācaraṇeye tanna tatprāṇavenisi,
samaya prasādi bhaktajaṅgamācaraṇeye tanna bhāvavenisi,
guruprasādava paḍedu,
liṅgaprasādi bhaktajaṅgamācaraṇeye tanna hastapādavenisi,
Ī mārgavanariyade mūḍhātma
liṅgadēhi paramapātakarella
tanna visarjanatāṇavendaridu, eccaratappade,
sāvadhāna naḍenuḍiyinda paranāda cidbandusvarūpavāda
vibhūti rudrākṣi praṇama pādōdaka prasādaṅgaḷa
sākāravādiṣṭaliṅgārōpita,
nirākāravāda prāṇaliṅgārōpita
niravayavāda bhāvaliṅgārōpitaṅgaḷinda
paripūrṇa miśrārpaṇadormādivarmavaridu
mēlāda ayōgyātītavāda trikūṭadaSaṅgasamaratiya sarvāvasthegaḷella aḍimeṭṭi
yōgyavāda trikūṭada saṅgasamaratiya
sarvāvasthegaḷallagalade,
eccarandaḷedu, maimareyade,
trividhaguhyasthānavemba trividhamaneyallirpa
trividhabinducalanārahitavāgi,
tanna tā sākṣiyinda, nijanivāsakke tavarumaneyendu,
grāmabandhana niḷayabandhana
dravyabandhana īṣaṇatrayabandhanavemba
Kālakāmamāyāsansārasāgarava dāṇṭi,
nirmāya kālakāmaniḥsansārasāgaramaṁ atimōhavillade,
liṅganimityavāgi, dravyada niḥkaḷaṅkamūrti tānē tānāgi
virājisuvavare citkalāprasādi bhaktajaṅgama kāṇā
niravayaprabhu mahānta sid'dhamallikārjunaliṅgēśvara.