Index   ವಚನ - 9    Search  
 
ಅಪ್ಪುವಾಸವ ತುಂಬುವ ಲೆಪ್ಪಣದಂತೆ, ತುಂಬುವಲ್ಲಿ ಕಟ್ಟಿಲ್ಲ. ಸೂಸುವಲ್ಲಿ ಪರಿಮಳವಾದಂತೆ ಅರಿವಿನ ಭೇದ. ಇಷ್ಟದ ಮುಟ್ಟು, ಕಳೆಯ ಗೊತ್ತನರಿಯಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.