Index   ವಚನ - 12    Search  
 
ಅರಿವೆಂಬುದೆ ಕ್ರೀ, ಕ್ರೀಯೆಂಬುದೆ ನಿರವಯ. ಅದೆಂತೆಂದಡೆ : ಧರೆಯ ವಾರಿಯ ವಾಯು, ಆಕಾಶಕ್ಕೆ ತಂದು ಸುರಿವಂತೆ, ಬಾವಿಯ ನೀರ, ಭಾಜನ ತಂದು ಕೊಡುವಂತೆ, ಇಷ್ಟಲಿಂಗದ ನಿಷ್ಠೆ ದೃಷ್ಟವಾದಲ್ಲಿ, ವಸ್ತುವ ಕಟ್ಟಿ ತಂದು ಕೊಡುವುದು. ಕೊಡುವುದಕ್ಕೆ ಸಂದೇಹವಿಲ್ಲ. ಅದಕ್ಕೆ ದೃಷ್ಟವ ಕೇಳುವುದಕ್ಕೆ, ಅನ್ಯಭಿನ್ನಕ್ಕೆ ತೆರಪಿಲ್ಲ. ಐಘಟದೂರ ರಾಮೇಶ್ವರಲಿಂಗಕ್ಕೆ ಸಾವಯ ನಿರವಯವೆಂಬುದಿಲ್ಲ.