Index   ವಚನ - 15    Search  
 
ಭಕ್ತಂಗೆ ಸುಖವೂ ಸರಿ, ದುಃಖವೂ ಸರಿ, ಉರಿ ಸಿರಿ ಉಭಯವೂ ಸರಿ ಎನ್ನದಿರ್ದಡೆ ಭಕ್ತನಿಗದೇ ಹಾನಿ. ಜಂಗಮವೆಂದು ಪ್ರಮಾಣಿಸಿ, ತನ್ನ ಕಂಗಳ ಮುಂದೆ ಕಂಡವರ ಭಂಜಿಸಲಿಕ್ಕೆ, ತನ್ನಂಗವ ಹೊರೆದಡೆ ತೀರ್ಥಪ್ರಸಾದಕ್ಕೆ ಅವನಂದೇ ಹೊರಗು, ಗವರೇಶ್ವರಾ.