ಕ್ರಿಯಾಲಿಂಗ ಜ್ಞಾನಲಿಂಗಂಗಳೆಂಬಲ್ಲಿ,
ಉಭಯವೆರಡು ಲಿಂಗವೆಂದು ಕಲ್ಪಿಸುವಲ್ಲಿ
ಅದಕ್ಕೆ ಭಿನ್ನಭಾವವಾವುದು?
ಕುಂಭಂಗಳೊಳಗೆ ಹುದುಗಿಕ್ಕಿದ ಕಿಚ್ಚು,
ಆ ಕುಂಭಂಗಳಿಗೆ ಒಳಗೆ ಮುಟ್ಟಿದಡೂ ಹೊರಗೆ ಮುಟ್ಟಿದಡೂ
ಪಾಕಪ್ರಯತ್ನ ತಪ್ಪದಾಗಿ.
ಇಂತೀ ದೃಷ್ಟದ ಲಕ್ಷಿತದಂತೆ ಹೊರಗಣ ಕ್ರಿಯಾಸಂಬಂಧ,
ಒಳಗಣ ಜ್ಞಾನಸಂಬಂಧವು; ಉಭಯದ ತತ್ತಿಲ್ಲ.
ಸಕ್ಕರೆಯ ರಾಶಿಗೆ ಕಿಸೆಯ ಕೆಲನುಂಟೆ?
ನಿಶ್ಚಯದ ಲಿಂಗಾಂಗಿಗೆ ಉಭಯದ ತಟ್ಟುಮುಟ್ಟೆಂಬ
ಗುಟ್ಟಿನ ಕುಲವಿಲ್ಲ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಲಿಂಗವು
ಸ್ವಯಾನುಭಾವಸಿದ್ಧನಾದ ಕಾರಣ.
Art
Manuscript
Music
Courtesy:
Transliteration
Kriyāliṅga jñānaliṅgaṅgaḷemballi,
ubhayaveraḍu liṅgavendu kalpisuvalli
adakke bhinnabhāvavāvudu?
Kumbhaṅgaḷoḷage hudugikkida kiccu,
ā kumbhaṅgaḷige oḷage muṭṭidaḍū horage muṭṭidaḍū
pākaprayatna tappadāgi.
Intī dr̥ṣṭada lakṣitadante horagaṇa kriyāsambandha,
oḷagaṇa jñānasambandhavu; ubhayada tattilla.
Sakkareya rāśige kiseya kelanuṇṭe?
Niścayada liṅgāṅgige ubhayada taṭṭumuṭṭemba
guṭṭina kulavilla,
ennayyapriya im'maḍi niḥkaḷaṅka mallikārjunaliṅgavu
svayānubhāvasid'dhanāda kāraṇa.