Index   ವಚನ - 55    Search  
 
ಮಣ್ಣನಿತ್ತು ನಿಮ್ಮ ಕಂಡೆಹೆನೆಂದಡೆ ಜಗಭರಿತ ನೀನು. ಹೊನ್ನನಿತ್ತು ನಿಮ್ಮ ಕಂಡೆಹೆನೆಂದಡೆ ಹಿರಣ್ಯಮೂರ್ತಿ ನೀನು. ಹೆಣ್ಣನಿತ್ತು ನಿಮ್ಮ ಕಂಡೆಹೆನೆಂದಡೆ ತ್ರಿವಿಧಶಕ್ತಿಮೂರ್ತಿ ನೀನು. ಮನವನಿತ್ತು ನಿಮ್ಮ ಕಂಡೆಹೆನೆಂದಡೆ ಮನೋಮೂರ್ತಿ ನೀನು. ಎನಗೇನು ನಿನಗಿತ್ತು ಕಾಬ ಕಾಣಿಕೆ, ನೀನು ಸಿಕ್ಕುವುದಕ್ಕೆ? ಕ್ರೀಯಲ್ಲಿ ನಿರತ, ಸದ್ಭಾವದಲ್ಲಿ ಶುದ್ಧ, ಹಿಡಿದುದ ಬಿಡದೆ, ಬಿಟ್ಟುದ ಹಿಡಿಯದೆ, ನಿಶ್ಚಯವಾದ ನಿಜಜ್ಞಾನಿಗಳಲ್ಲಿ ಬೆಚ್ಚಂತಿದ್ದಡೆ ನೀನು ಅಲ್ಲಿ ತಪ್ಪದಿಪ್ಪೆ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ.