ಹೇಮದ ಬೆಂಬಳಿಯ ಸ್ವರೂಪದಂತೆ,
ಗ್ರಾಮದ ಬೆಂಬಳಿಯ ಬಟ್ಟೆಯಂತೆ.
ಹೇಮದ ರೂಪವಳಿದು ಸ್ವರೂಪವಡಗಿದಲ್ಲಿ
ಕುಶಲಚಿತ್ರವೆಲ್ಲಿದ್ದಿತ್ತು?
ಬಟ್ಟೆಯ ಮೆಟ್ಟಿ ಹೋಗಿ ಪುನರಪಿಯಾಗಿ ತಿರುಗಿದಲ್ಲಿ,
ಊರ ಬಾಗಿಲ ಬಟ್ಟೆಯ ಒಂದರಲ್ಲಿ ಹೋಗಬೇಕು.
ಇದು ದೃಷ್ಟಕ್ಕೆ ಕೊಟ್ಟ ಇಷ್ಟ; ಆ ಇಷ್ಟ ಚಿತ್ತದಲ್ಲಿ ಅಚ್ಚೊತ್ತಿದ ಮತ್ತೆ,
ಆ ನಿಶ್ಚಯ ಉಭಯವ ತಿಳಿದಲ್ಲಿ,
ಕಾಯಕ್ಕೆ ಕೈಲಾಸವೆಂಬುದಿಲ್ಲ, ಭಾವಕ್ಕೆ ಬಯಲೆಂಬುದಿಲ್ಲ.
ಅನಲನಲ್ಲಿ ಅರತ ದ್ರವ್ಯದಂತೆ ಅದು ಅಮೂರ್ತಿಭಾವ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ.
Art
Manuscript
Music
Courtesy:
Transliteration
Hēmada bembaḷiya svarūpadante,
grāmada bembaḷiya baṭṭeyante.
Hēmada rūpavaḷidu svarūpavaḍagidalli
kuśalacitravelliddittu?
Baṭṭeya meṭṭi hōgi punarapiyāgi tirugidalli,
ūra bāgila baṭṭeya ondaralli hōgabēku.
Idu dr̥ṣṭakke koṭṭa iṣṭa; ā iṣṭa cittadalli accottida matte,
ā niścaya ubhayava tiḷidalli,
kāyakke kailāsavembudilla, bhāvakke bayalembudilla.
Analanalli arata dravyadante adu amūrtibhāva,
ennayyapriya im'maḍi niḥkaḷaṅka mallikārjunanalli.