ಅಚ್ಚಿನಲ್ಲಿ ಬೆಟ್ಟದ ರೂಹು ದೃಷ್ಟವಾಯಿತ್ತು.
ಮನಮಚ್ಚಿ ಕೊಟ್ಟ ಲಿಂಗ, ಹೃತ್ಕಮಲದಲ್ಲಿ ಮುಟ್ಟಿದುದಿಲ್ಲ.
ತಾ ದೃಷ್ಟಿತನಾದಲ್ಲದೆ ಇದಿರಿಂಗಿಷ್ಟವ ಕಟ್ಟಬಾರದು.
ಕಟ್ಟಿಕೊಂಡು ಮತ್ತೆ ಗುರಿಯನೆಚ್ಚ ಕೈಯ ಲಾಹರಿಯಂತಿಬೇಕು.
ರಣವ ಗೆಲಿದ ಧೀರನ ಉದಾರದಂತಿರಬೇಕು.
ಹೀಂಗಲ್ಲದೆ ಗುರುಸಂಬಂಧವೆಲ್ಲ
ಮಡಕೆಯ ಮರೆಯ ಕ್ಷೀರದಂತೆ ಕೈಗುಡಿತೆಗೆ ಬಂದುದಿಲ್ಲ,
ಈ ಗುರುಸ್ಥಲವೆಂದಡಕವೇಕೆ, ನಿಃಕಳಂಕ ಮಲ್ಲಿಕಾರ್ಜುನಾ?
Art
Manuscript
Music
Courtesy:
Transliteration
Accinalli beṭṭada rūhu dr̥ṣṭavāyittu.
Manamacci koṭṭa liṅga, hr̥tkamaladalli muṭṭidudilla.
Tā dr̥ṣṭitanādallade idiriṅgiṣṭava kaṭṭabāradu.
Kaṭṭikoṇḍu matte guriyanecca kaiya lāhariyantibēku.
Raṇava gelida dhīrana udāradantirabēku.
Hīṅgallade gurusambandhavella
maḍakeya mareya kṣīradante kaiguḍitege bandudilla,
ī gurusthalavendaḍakavēke, niḥkaḷaṅka mallikārjunā?