Index   ವಚನ - 22    Search  
 
ಅಜ ಗಳದಲ್ಲಿ ಬಿಡುಮೊಲೆಯಿದ್ದಡೆ ಅದು ಗಡಿಗೆಗೇಡು. ದೃಢವೆನಗಿಲ್ಲದಲ್ಲಿ ಒಡಗೂಡುವುದಕ್ಕೆಡಹೆ? ತುಡುಗುಣಿಯಲ್ಲಿ ಮೀಸಲುಂಟೆ? ಅಡಿಯನರಿಯದವಂಗೆ ದೃಢಭಕ್ತಿಯುಂಟೆ? ಇಂತಿವರೊಡಗೂಡುವ ಗುರುಶಿಷ್ಯನ ಇರವು, ಪರಿಭ್ರಮಣ ಬಂದು ಶರೀರವನೊಡಗೂಡಿದಂತೆ, ನಿಃಕಳಂಕ ಮಲ್ಲಿಕಾರ್ಜುನಾ.