Index   ವಚನ - 33    Search  
 
ಅಪರವನರಿತೆನೆಂದು ಪರಮನ ಬಿಡಲೇತಕ್ಕೆ? ನಿಃಕ್ರೀಯವನರಿತೆನೆಂದು ಕ್ರೀಯ ಬಿಡಲೇಕೆ? ಭಕ್ತಿಯಿಂದ ಜ್ಞಾನ, ಜ್ಞಾನದಿಂದ ವೈರಾಗ್ಯ, ವೈರಾಗ್ಯದಿಂದ ನಿಜದ ನಿಶ್ಚಯ. ಅದಕ್ಕೆ ಸಂದಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.