Index   ವಚನ - 58    Search  
 
ಅರಿವಿಂದ ಕಂಡೆಹೆನೆಂದಡೆ, ಅರಿವಿಂಗೆ ಮರಹು ಹಿಡಿಯಬೇಕು. ಕುರುಹಿನಿಂದ ಕಂಡೆಹೆನೆಂದಡೆ, ಆ ಕುರುಹಿನಲ್ಲಿ ಅರಿವು ಕರಿಗೊಳ್ಳಬೇಕು. ಉಭಯವನರಿದ ಮತ್ತೆ ಅರಿವಿನಿಂದ ಅರಿದೆಹೆನಂದಡೆ ಆ ಅರಿವು ನಾನಾ ಯೋನಿಯಲ್ಲಿ ಒಳಗಾಯಿತ್ತು. ಕುರುಹಿನಿಂದ ಅರಿದೆಹೆನೆಂದಡೆ, ಆ ಕುರುಹು ಪುನರಪಿಗೊಳಗಾಯಿತ್ತು. [ಆ]ಅರಿವನರಿ [ವ] ಅರಿವೇನೋ? ಕುರುಹನರಿವ ಅರಿವದೇನೋ? ಅರಿವನರಿದಲ್ಲಿಯೂ ಕುರುಹನರಿದಲ್ಲಿಯೂ ಅರಿವಿಂಗೆ ತೆರಹಿಲ್ಲ. ಬರಿದೆ ಅರಿದೆನೆಂಬ ಬರುಬರ ಮೆಚ್ಚ, ನಿಃಕಳಂಕ ಮಲ್ಲಿಕಾರ್ಜುನಾ