Index   ವಚನ - 59    Search  
 
ಅರಿವು ಕರಿಗೊಂಡಲ್ಲಿ ಇದರ ತೆರನನರಿಯಬೇಕು. ತನ್ನ ಮರೆಯಬೇಕು, ಲಿಂಗವನರಿಯಬೇಕು. ಅರಿದ ಮತ್ತೆ ಎರಡಕ್ಕೆ ತೆರಪಿಲ್ಲ, ಹಿಡಿವುದಕ್ಕೆ ಅಂಗವಿಲ್ಲ. ಅರಿವುದಕ್ಕೆ ಆತ್ಮವಿಲ್ಲ. ಬೇರೆ ಬಿಡುಗಡೆ ಇಲ್ಲವಾಗಿ, ಆ ಅರಿಕೆ ತಾನೆ ಶರಣನಲ್ಲಿ. ಇದು ನಿರ್ಲೇಪ, ಶರಣಸ್ಥಲ, ನಿಃಕಳಂಕ ಮಲ್ಲಿಕಾರ್ಜುನಾ