Index   ವಚನ - 76    Search  
 
ಆಚಾರ ಅನುಸರಣೆಯಾದಲ್ಲಿ, ಲಿಂಗ ಬಾಹ್ಯವಾದಲ್ಲಿ, ತನ್ನ ವ್ರತ ನೇಮಕ್ಕೆ ಅನುಕೂಲವಾಗದೆ ಭಿನ್ನಭಾವಿಗಳಾದಲ್ಲಿ, ಸತಿ ಸುತ ಪಿತ ಮಾತೆ ಸರ್ವಚೇತನ ಬಂಧುಗಳಾದಡೂ ಗುರು ಲಿಂಗ ಜಂಗಮವಾದಡೂ ಒಪ್ಪೆನು. ಇದಿರಿಂಗೆ ದೃಷ್ಟವ ತೋರಿ, ಪರಕ್ಕೆ ಕೊಂಡುಹೋದೆಹೆನೆಂದಡೂ ಆ ಕೈಲಾಸ ಎನಗೆ ಬೇಡ. ಆಚಾರಕ್ಕೆ ಅನುಸರಣೆಯಿಲ್ಲದೆ, ನೇಮಕ್ಕೆ ಕುಟಿಲವಿಲ್ಲದೆ ನಿಂದ ಸದ್ಭಕ್ತನ ಬಾಗಿಲ, ಬಚ್ಚಲ ಕಲ್ಲೆ, ಎನಗೆ ನಿಶ್ಚಯದ ಕೈಲಾಸ, ನಿಃಕಳಂಕ ಮಲ್ಲಿಕಾರ್ಜುನಾ.