Index   ವಚನ - 85    Search  
 
ಆದ್ಯರ ವಚನವ ನೋಡಿ, ಓದಿ ಹೇಳಿದಲ್ಲಿ ಫಲವೇನಿ ಭೋ ? ತನ್ನಂತೆ ವಚನವಿಲ್ಲ, ವಚನದಂತೆ ತಾನಿಲ್ಲ. ನುಡಿಯಲ್ಲಿ ಅದ್ವೈತವ ನುಡಿದು, ನಡೆಯಲ್ಲಿ ಅಧಮರಾದಡೆ, ಶಿವಶರಣರು ಮೆಚ್ಚುವರೆ ? ಇದು ಕಾರಣ, ಅವರ ನಡೆನುಡಿ ಶುದ್ಧವಿಲ್ಲವಾಗಿ, ಅವರಿಗೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಪಂಚಮ ಪಂಚಾಕ್ಷರವಿಲ್ಲ. ಇಂತಿವಿಲ್ಲದೆ ಬರಿಯಮಾತಿನಲ್ಲಿ ಬೊಮ್ಮವ ನುಡಿವ ಬ್ರಹ್ಮೇತಿಕಾರರ ಮೆಚ್ಚ, ನಿಃಕಳಂಕ ಮಲ್ಲಿಕಾರ್ಜುನ.