Index   ವಚನ - 84    Search  
 
ಆತ್ಮ ಪೃಥ್ವಿಯ ಗುಣವೊ ? ಅಪ್ಪುವಿನ ಗುಣವೊ ? ತೇಜದ ಗುಣವೊ? ವಾಯುವಿನ ಗುಣವೊ? ಆಕಾಶದ ಗುಣವೊ? ತನ್ನ ಸ್ವಬುದ್ಧಿಯೊ ? ಎಂಬುದ ತಿಳಿಯಬೇಕು, ಆಧ್ಯಾತ್ಮವನರಿದೆಹೆನೆಂಬ ಲಿಂಗಾಂಗಿಗಳು. ಅದು ಅಡಗಿ, ಉಡುಗಿಹ ಭೇದವನರಿದಡೆ, ಅದೇ ಲಿಂಗೈಕ್ಯವು, ನಿಃಕಳಂಕ ಮಲ್ಲಿಕಾರ್ಜುನಾ.