Index   ವಚನ - 86    Search  
 
ಆದಿ ಅನಾದಿ ಅಂತರಾದಿ ನಾದ ಬಿಂದು ಕಳೆ ಸ್ಥೂಲ ಸೂಕ್ಷ್ಮ ಕಾರಣ ಆದಿ ಮಧ್ಯಾವಸಾನಂಗಳಲ್ಲಿ ಜಗದಲ್ಲಿ ಸಾಧಿಸುತ್ತಿರ್ದ ಬೋಧರುಗಳು ನೀವು ಕೇಳಿರೊ. ಅಭ್ಯೇದಲಿಂಗವ ಭೇದಿಸಿ ಸುಬುದ್ಧಿಯಿಂದ ಕಂಡ ಪರಿ ಇನ್ನೆಂತೊ ? ಮಾತಿನ ಮಾಲೆಯ ಕಲಿತು ಸಂತೆಯ ಹೋತಿನಂತೆ ಹೋರುವ ತೂತಜ್ಞಾನಿಗಳಿಗಿನ್ನೇತರ ಭಕ್ತಿ ವಿರಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ ?