ಆದಿ ಮಧ್ಯ ಅವಸಾನವ ತಿಳಿದು ಆತ್ಮನನೆಯ್ದಬೇಕೆಂಬುದು
ಅದಾವ ಭಾವ ? ತಿಳಿದು ಹೇಳಿರಣ್ಣಾ.
ಆದಿಯ ತಿಳಿವುದು ಅದಾವ ಆತ್ಮ ?
ಮಧ್ಯವ ತಿಳಿವುದು ಅದಾವ ಆತ್ಮ?
ಅವಸಾನವ ತಿಳಿವುದು ಅದಾವ ಆತ್ಮ?
ಅದು ಅರುವೋ, ಮರವೆಯೋ ?
ಕೆಂಡ ಕೆಟ್ಟಡೆ ಹೊತ್ತುವುದಲ್ಲದೆ,
ದೀಪ ನಂದಿದ ಕಿಡಿ ತುಷ ಮಾತ್ರಕ್ಕೆ ಹೊತ್ತಿದುದುಂಟೆ ?
ಇಂತೀ ಆಧ್ಯಾತ್ಮವ ತಿಳಿದಲ್ಲಿ,
ಮೂರುಸ್ಥಲ ಮುಕ್ತ, ಉಭಯವಾರುಸ್ಥಲ ಭರಿತ.
ಮಿಕ್ಕಾದ ನೂರೊಂದೆಂದು ಗಾರಾಗಲೇತಕ್ಕೆ?
ಪೂರ್ವದಲ್ಲಿ ನಿಂದು, ಉತ್ತರದಲ್ಲಿ ಒಂದೆಂದು,
ಸಲೆ ಸಂದಲ್ಲಿ ನಾನಾ ಸ್ಥಲ ಐಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Ādi madhya avasānava tiḷidu ātmananeydabēkembudu
adāva bhāva? Tiḷidu hēḷiraṇṇā.
Ādiya tiḷivudu adāva ātma?
Madhyava tiḷivudu adāva ātma?
Avasānava tiḷivudu adāva ātma?
Adu aruvō, maraveyō?
Keṇḍa keṭṭaḍe hottuvudallade,
dīpa nandida kiḍi tuṣa mātrakke hottiduduṇṭe?
Intī ādhyātmava tiḷidalli,
mūrusthala mukta, ubhayavārusthala bharita.
Mikkāda nūrondendu gārāgalētakke?
Pūrvadalli nindu, uttaradalli ondendu,
sale sandalli nānā sthala aikya, niḥkaḷaṅka mallikārjunā.