Index   ವಚನ - 87    Search  
 
ಆದಿ ಮಧ್ಯ ಅವಸಾನವ ತಿಳಿದು ಆತ್ಮನನೆಯ್ದಬೇಕೆಂಬುದು ಅದಾವ ಭಾವ ? ತಿಳಿದು ಹೇಳಿರಣ್ಣಾ. ಆದಿಯ ತಿಳಿವುದು ಅದಾವ ಆತ್ಮ ? ಮಧ್ಯವ ತಿಳಿವುದು ಅದಾವ ಆತ್ಮ? ಅವಸಾನವ ತಿಳಿವುದು ಅದಾವ ಆತ್ಮ? ಅದು ಅರುವೋ, ಮರವೆಯೋ ? ಕೆಂಡ ಕೆಟ್ಟಡೆ ಹೊತ್ತುವುದಲ್ಲದೆ, ದೀಪ ನಂದಿದ ಕಿಡಿ ತುಷ ಮಾತ್ರಕ್ಕೆ ಹೊತ್ತಿದುದುಂಟೆ ? ಇಂತೀ ಆಧ್ಯಾತ್ಮವ ತಿಳಿದಲ್ಲಿ, ಮೂರುಸ್ಥಲ ಮುಕ್ತ, ಉಭಯವಾರುಸ್ಥಲ ಭರಿತ. ಮಿಕ್ಕಾದ ನೂರೊಂದೆಂದು ಗಾರಾಗಲೇತಕ್ಕೆ? ಪೂರ್ವದಲ್ಲಿ ನಿಂದು, ಉತ್ತರದಲ್ಲಿ ಒಂದೆಂದು, ಸಲೆ ಸಂದಲ್ಲಿ ನಾನಾ ಸ್ಥಲ ಐಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.