Index   ವಚನ - 88    Search  
 
ಆದಿಯನರಿದ ಮತ್ತೆ ಅನಾದಿಯಲ್ಲಿ ನಡೆವ ಪ್ರಪಂಚೇಕೆ ? ಅನಾಗತವನರಿದ ಮತ್ತೆ ಅನ್ಯಾಯದಲ್ಲಿ ನಡೆವ ಗನ್ನವೇಕೆ ? ಇಹಪರವೆಂಬುಭಯವನರಿದ ಮತ್ತೆ ಪರರ ಬೋಧಿಸಿ ಹಿರಿಯನಾದೆಹೆನೆಂಬ ಹೊರೆಯೇತಕ್ಕೆ? ಯೋಗಿಯಾದ ಮತ್ತೆ ರೋಗದಲ್ಲಿ ನೋಯಲೇತಕ್ಕೆ? ಆದಿಮಧ್ಯಾಂತರವನರಿದ ಮತ್ತೆ ಸಾಯಸವೇಕೆ ಕರ್ಮದಲ್ಲಿ? ಇಂತೀ ಭೇದಕರಿಗೆ ಅಭೇದ್ಯ, ಅಪ್ರಮಾಣ ಅಭಿನ್ನವಾದ ಶರಣಂಗೆ ನಮೋ ನಮೋ ಎಂದು ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ.