Index   ವಚನ - 92    Search  
 
ಆ ಪರವನರಿದುದೆ ಕಪ್ಪರ. ತ್ರಿವಿಧವ ಮುರಿದುದೆ ದಂಡ. ಸರ್ವವ ಕೇಳಿಯು ಕೇಳದಿಪ್ಪುದೆ ಕುಂಡಲ. ರುದ್ರನ ಪಾಶವ ಕಿತ್ತು ಘಟ್ಟಿಗೊಂಡುದೆ ಜಡೆ. ಜ್ಞಾನ ವಿಜ್ಞಾನ ಸುಜ್ಞಾನ ಮಹಾಜ್ಞಾನ ಅಪರ ಜ್ಞಾನ ಇಂತೀ ಪಂಚಮಜ್ಞಾನ ಒಂದಮಾಡಿ, ಬ್ರಹ್ಮಲಿಖಿತನ ತೊಡದಂತೆ ಧರಿಸುವದೆ ತ್ರಿಪುಂಡ್ರ, ಇಂತೀ ನಿರಾಲಂಬ ವೇಷಮಂ ಧರಿಸಿ ಭಕ್ತನೆಂಬ ಭೂಮಿಯಲ್ಲಿ ಸಕಲ ಕರಣೇಂದ್ರಿಯಂಗಳನಳಿದು ತೀರ್ಥಯಾತ್ರೆಯಂ ಮಾಡುತ್ತ ಕಳೆಯದುಳಿಯಬಲ್ಲರೆ ಆತನೆ ಲಿಂಗಜಂಗಮ ನಿಃಕಳಂಕ ಮಲ್ಲಿಕಾರ್ಜುನಾ.