Index   ವಚನ - 109    Search  
 
ಇನ್ನೇನಹುದೆಂಬೆ, ಇನ್ನೇನಲ್ಲೆಂಬೆ, ಎಲ್ಲಾಮಯವು ನೀನಾಗಿ ? ಹಿರಿದಹ ಗಿರಿಯ ಹತ್ತಿ, ಬಿದಿರೆಲೆಯ ತರಿದ[ವ]ನಂತೆ, ಒಂದ ಬಿಟ್ಟೊಂದ ಹಿಡಿದಡೆ ಅದೆಲ್ಲಿಯ ಚಂದ ? ಹಿಂಗುವುದಕ್ಕೆ ಠಾವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.