Index   ವಚನ - 114    Search  
 
ಇಷ್ಟಲಿಂಗದಲ್ಲಿ ಮುಟ್ಟುತಟ್ಟು ಬಲ್ಲವಂಗೆ ಕಷ್ಟನಿದ್ರೆಯ ಮುಟ್ಟುವ ಭೇದವ, ತಟ್ಟುವ ಪರಿಯಿನ್ನೆಂತುಟೋ ? ಇಂತಿವರು ಮುಟ್ಟರು, ಅರಿಯರು, ನಿಶ್ಚಯದ ನಿಜ ಏಕತ್ವವನರಿಯರು. ಇವರಿಷ್ಟಲಿಂಗವ ಮುಟ್ಟಿ ಪೂಜಿಸಲೇಕೆ, ನಿಃಕಳಂಕ ಮಲ್ಲಿಕಾರ್ಜುನಾ ?