Index   ವಚನ - 113    Search  
 
ಇಷ್ಟಲಿಂಗಕ್ಕವಿರ್ತದ ಭಾಜನದೆಂದು, ತುತ್ತ ನುಂಗವುದಕ್ಕೊಂದು ಮಿಥ್ಯದ ಭಾಜನದೆಂದು, ಈ ಅಚ್ಚುಗದಲ್ಲಿ ಬಿದ್ದು ಸಾವರಿಗೆತ್ತಣ ಲಿಂಗಾರ್ಪಿತ ? ಮಜ್ಜನ ಮಲಿನ ಹೊದ್ದಿಹ ಸುಖ ಶೃಂಗಾರ, ಇವರೊಳಗೆ ವರ್ಜಿತವೆಂದ. ಲಿಂಗಕ್ಕೊಂದು ಹಂಗು, ತಾನುಂಬದಕ್ಕೆ ಒಂದು ಹಂಗು, ಇದರಂದವನರಿಯದೆ ಬೆಳದಿಂಗಳಲ್ಲಿ ನಿಂದು, ಹೆಂಡವ ಕೊಂಡವನಂತೆ ಲಿಂಗದ ಸಂದನೇನ ಬಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.