Index   ವಚನ - 116    Search  
 
ಇಷ್ಟಲಿಂಗವನರ್ಚಿಸುವನ ಇರವು, ಹೇಮಾಚಲದ ಶಿಲೆಯಂತಿರಬೇಕು. ಕುಸುಮದ ಅಪ್ಪುವಿನ ಸ್ನೇಹದಂತಿರಬೇಕು, ಅಯಕಾಂತದ ಶಿಲೆ ಲೋಹದಂತಿರಬೇಕು, ಅಣುವಿನನೊಳಗಣ ನೇಣಿನಂತಿರಬೇಕು. ಇಷ್ಟಕ್ಕೂ ಪ್ರಾಣಕ್ಕೂ ತತ್ತುಗೊತ್ತಿಲ್ಲದ ಬೆಚ್ಚಂತಿರಬಲ್ಲಡೆ, ಆತನೇ ಇಷ್ಟ ಪ್ರಾಣ ತೃಪ್ತಿವಂತನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.