Index   ವಚನ - 118    Search  
 
ಇಷ್ಟಲಿಂಗದಂಗ ಭಕ್ತಿಸ್ಥಲ, ಭಾವಲಿಂಗದಂಗ ಮಾಹೇಶ್ವರಸ್ಥಲ, ಪ್ರಾಣಲಿಂಗದಂಗ ಪ್ರಸಾದಿಸ್ಥಲ, ಶರಣಸ್ಥಲದಂಗ ಐಕ್ಯಸ್ಥಲ. ಐಕ್ಯಸ್ಥಲದಂಗ ಅಭೇದ್ಯಸ್ಥಲದಂಗ. ಇಂತೀ ಉಭಯವಳಿದ ನಿರಂಗಂಗೆ ಸ್ಥಲ ಕುಳ ಲೇಪವಾಯಿತ್ತು. ನಿಃಕಳಂಕ ಮಲ್ಲಿಕಾರ್ಜುನಾ.