Index   ವಚನ - 123    Search  
 
ಈದ ಪಶುವಿನ ಮೊಲೆಯಲ್ಲಿ ಕೈಯನಿಕ್ಕಿದಡೆ ಕ್ಷೀರವಲ್ಲದೆ, ಬಂಜೆಯಾವಿನ ಮೊಲೆಯಲ್ಲಿ ಉಂಟೆ ? ಇದರಂದವ ತಿಳಿವುದು ಲಿಂಗಾಂಗಿಗಳು. ಹೊತ್ತು ತುಂಬಿದವಳು ಬಲ್ಲಳು ತನ್ನ ನಿತ್ತರಿಸುವ ಬೇನೆಯ. ಭಕ್ತಿಯುಳ್ಳವರು ಬಲ್ಲರು ನಿಶ್ಚಟದ ಲಿಂಗಾಂಗಿಗಳ. ಇಂತೀ ಸತ್ಯವನರಿಯದೆ ಹೊತ್ತು ಹೋಕನಾಗಿ ನುಡಿವ ಮರ್ತ್ಯರಿಗೇಕೆ, ನಿಃಕಳಂಕ ಮಲ್ಲಿಕಾರ್ಜುನಾ.