Index   ವಚನ - 136    Search  
 
ಉದಕವ ನುಂಗಿದ ಕೆಸರಿನಂತೆ, ಆತ್ಮ ಗಸಣಿಗೊಳಗಾಯಿತ್ತು. ಉದಕವರತ ಕೆಸರಿನ ತೆರನುಂಟೆ ? ಈ ಉಭಯಭೇದವನರಿದಡೆ ಪ್ರಾಣಲಿಂಗಿಯೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.