Index   ವಚನ - 139    Search  
 
ಉದ್ಯಾಪನ ವ್ಯಾಪಾರ ಕೃತಭೇದ ಸರ್ವವನರಿದು, ತ್ಯಾಗಾಂಗನಾಗಿ, ಭೋಗಾಂಗನಾಗಿ, ಯೋಗಾಂಗನಾಗಿ, ತಾಮಸ ನಿರಸನವಾಗಿ, ಭೂತ ಭವಿಷ್ಯದ್ವರ್ತಮಾನಕ್ಕೆ ಹೊರಗಾಗಿ ನಿಂದ ನಿಜತತ್ವದಂಗಕ್ಕೆ ಬೇರೆ ಮಂಗಲೋತ್ತರವರಸಲಿಲ್ಲ. ಲಿಂಗವನಂಗಬಾಹ್ಯದಲ್ಲಿ ಇರ್ದಿಹೆನೆಂಬ ಭ್ರಾಂತಿಲ್ಲ. ಆತ ಲಿಂಗವೆ ಅಂಗವಾದ ಕಾರಣ, ಪೃಥಕ್ ಎಂಬುದಿಲ್ಲ. ಆತನಂಗವೆ ಮಂಗಲದೊಡಲು, ನಿಃಕಳಂಕ ಮಲ್ಲಿಕಾರ್ಜುನಾ.