Index   ವಚನ - 150    Search  
 
ಊಟದ ಸುಖವ ಕಲಿತ ಮತ್ತೆ ನೋಟಕ್ಕೆ ದೃಷ್ಟ. ನೋಟದ ಸುಖವ ಕಲಿತ ಮತ್ತೆ ಬೇಟಕ್ಕೆ ದೃಷ್ಟ. ಬೇಟದ ಸುಖವ ಕಲಿತ ಮತ್ತೆ ಕೂಟಕ್ಕೆ ದೃಷ್ಟ. ಕೂಟದ ಸುಖವ ಕಲಿತ ಮತ್ತೆ ಜಗದಾಟಕ್ಕೆ ದೃಷ್ಟ. ಇಷ್ಟನರಿಯದೆ ನಿರ್ಜಾತನೆನಲೇಕೆ. ಇಷ್ಟಕ್ಕಂಜಿ ಈಸನ ಮರೆಯ ವೇಷವ ಬಿಟ್ಟು, ಎನ್ನಗಿನ್ನೇಸು ಕಾಲ ಆಸೆಯೆಂಬ ಕೋಳವೋ, ನಿಃಕಳಂಕಮಲ್ಲಿಕಾರ್ಜುನಾ.