Index   ವಚನ - 154    Search  
 
ಊರಿಗೆ ಹೋಹಾಗ ಓಣಿಯ ಇಕ್ಕೆಲದ ದಾರಿಯಲ್ಲಿ ಕಟ್ಟಿದ ಕಳ್ಳರ ದಂಡೆ. ಅವರ ವರ್ಣ; ಒಬ್ಬ ಕಪೋತ, ಒಬ್ಬ ಕೃಷ್ಣ. ಕಪೋತನ ಕಾಲ ಹೊಯ್ದು, ಕೃಷ್ಣನ ಕುತ್ತಿ ಕೆಡಹಿ, ಮತ್ತೆ ಹೋಗುತ್ತಿರಲಾಗಿ, ಓಣಿಯ ತಪ್ಪಲ ತಲಹದಲ್ಲಿ ಕಟ್ಟಿದ್ದನೊಬ್ಬ ಕಳ್ಳ. ಅವನ ಕಂಡು ಕೂಗುವಡೆ ಬಾಯಿಲ್ಲ, ಹೊಯ್ವಡೆ ಕೈದಿಲ್ಲ. ಮೀರಿ ಹೋದಹೆನೆಂದಡೆ ಹಾದಿಗೆ ಹೊಲಬಿಲ್ಲ. ಇದು ಅವನ ಕೌತುಕವೋ ? ಎನ್ನ ಭಾವದ ಭ್ರಮೆಯೋ ? ಮುಂದಣವನ ಸುದ್ದಿಯ ಹಿಂಗಿ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.